ಸಿಗಂದೂರು ! ಸಿಗಂದೂರು ಸಾಗರ ತಾಲ್ಲೂಕಿನ ಶರಾವತಿ ಹಿನ್ನೀರಿನ ಮಡಿಲಲ್ಲಿದೆ. ಕಾಡಿನಿಂದ ಆವೃತ್ತವಾದ ಸಿಗಂದೂರು ಸಣ್ಣ ಊರು. ಗಲಾಟೆ, ಗದ್ದಲಗಳಿಲ್ಲದ ಪ್ರಶಾಂತ ಸ್ಥಳ. ಶರಾವತಿ ಹಿನ್ನೀರಿನ ಹರಿವು, ಕಡಿದಾದ ಗುಡ್ಡಗಳ ನಡುವೆ ಶೇಖರವಾಗಿರುವ ಅಪಾರ ನೀರು, ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊ ಳ್ಳಬಹುದು. ಸಿಗಂದೂರು ಮೂರು ಕಡೆ ನೀರಿನಿಂದ ಆವೃತವಾಗಿದು, ಒಂದು ಬದಿಯಲ್ಲಿ ರಸ್ತೆಯ ಸಂಪರ್ಕ ಹೊಂದಿದೆ, ಸಿಗಂದೂರು ಚೌಡೇಶ್ವರಿಯ ಸನ್ನಿಧಿ ಹೋಗುವುದಕೆ ಶರಾವತಿ ಹಿನ್ನೀರಲ್ಲಿ ಕರ್ನಾಟಕ ಸರಕಾರ ಒಳನಾಡು ಜಲಸಾರಿಗೆ ಇಲಾಖೆಯ ಲಾಂಚ್ ನಲ್ಲಿಯೆ ತೇಲಿಹೋಗ ಬೇಕು! ಇದರಲ್ಲಿ ಪ್ರಯಾಣ ಮಾಡುವ ಅನುಭವ ಮನೋಹರವಾದದು, ಲಾಂಚ್ ನಲ್ಲಿ ಹೋಗುತ್ತಿರುವಾಗ ಮೀನುಗಳಿಗೆ ಕಳ್ಳೇಪುರಿ ಹಾಕುವುದು, ನೂರಾರು ಮೀನುಗಳು ಪುರಿ ನುಂಗುವುದಕ್ಕೆ ಜಗಳ ಕಾಯುವುದನ್ನು ನೊಡುವುದೆ ಒಂದು ಖುಫಿ. Sigandooru Sigandooru is a small village surrounded by lush green landscape and calm shallow backwaters of linganmakki dam formed by River #Sharavathi in #Sagara, #Karnataka. The village is surrounded on three sides by back waters of #Linganamakki and connected by road on one side, which can be reached via Kollur and Nagodi. . The place is known for Sigandur Chowdeshwari Temple.