ನಿನ್ನೆ ರಂಗ ಶಂಕರದಲ್ಲಿ ಪ್ರದರ್ಶನ ಗೊಂಡ ಸದಾರಮೆ ನಾಟಕ, ಗುಬ್ಬಿ ಕಂಪನಿಯ ಅತ್ಯಂತ ಯಶಸ್ವಿ ನಾಟಕ. ಬಿ.ಜಯಶ್ರೀ ರವರು ತಮ್ಮ ಅಜ್ಜ ಗುಬ್ಬಿ ವೀರಣ್ಣ ನಟಿಸಿ ಅಮರ ಗೊಳಿಸಿರುವ ಕಳ್ಳನ ಪಾತ್ರಕೆ ಬಣ್ಣ ಹಚ್ಚುವುದರ ಜೊತೆಗೆ ನಿರ್ದೇಶನವನ್ನು ಸಹ ನಿರ್ವಹಿಸಿದರು. ಜಯಶ್ರೀ ಅಮ್ಮ ನವರ ಪ್ರದರ್ಶನವಂತು ಅದ್ಭುತ ಮತ್ತು ಸತತ ೨ ಗಂಟೆಗಳ ಕಾಲ ಸಮಯ ಹೇಗೆ ಕಳೆಯಿತೆಂಬುದರ ಅರಿವೇ ಇಲ್ಲದೆ, ನಮ್ಮನು ಮನೋರಂಜನೆಯಲ್ಲಿ ಮಿಂದಿಸಿದ ಪ್ರತಿಭಾವಂತ ಕಲಾವಿದರ ನಟನೆ ಬಹಳ ಸೊಗಸಾಗಿತ್ತು. #Sadarame #RangaShankara #KannadaPlay #GubbiVeeranna #BJayashree #Kannada #Bengaluru #Karnataka #Instagram

















