Bengaluru posted 190-9, with Kohli top-scoring for the side with 43. The bowlers then restricted Punjab to 184-7, despite an unbeaten 61 off
seen from Malaysia

seen from United States

seen from Malaysia
seen from South Africa
seen from United States

seen from Germany
seen from United States

seen from France

seen from Türkiye

seen from Malaysia

seen from Malaysia
seen from Kenya
seen from United States
seen from United Kingdom
seen from United States
seen from China

seen from Malaysia
seen from Malaysia
seen from Armenia
seen from United States
Bengaluru posted 190-9, with Kohli top-scoring for the side with 43. The bowlers then restricted Punjab to 184-7, despite an unbeaten 61 off
ಈ ಸಲ ಕಪ್ ನಮ್ದೆ! ಇಲ್ಲಿದೆ 18ರ ಗುಟ್ಟು..!| RCB vs PBKS |IPL 2025
ಸ್ನೇಹಿತರೇ, 18, ಈ ಸಂಖ್ಯೆ ನೋಡಿದಾಗ ನಿಮಗೆ ಏನು ಅನ್ನಿಸುತ್ತೆ? ನೀವು ಒಬ್ಬ maths lover ಆಗಿದ್ರೆ, ನೀವು ಇದೊಂದು ಸಮ ಸಂಖ್ಯೆ ಅಥವಾ Even number ಅಂತಾ ಕರಿತಿರಾ. ಕೆಲವರು ಇದು ನನ್ನ ವಯಸ್ಸು ಅಂತಾ ಹೇಳಬಹುದು. ಇದು ವಯಸ್ಕನಾಗೋ ವಯಸ್ಸು ವೋಟಿಂಗ್ ರೈಟ್ಸ್ ಸಿಗುತ್ತೆ. ಆದರೆ ಈ 18 ಕೆಲವರಿಗೆ ಬಹಳ ವಿಶೇಷ, ಅದರಲ್ಲೂ ಕ್ರಿಕೆಟ್ ಲವರ್ಸ್ ಗೆ ಇನ್ನೂ ವಿಶೇಷ. ಯಾಕೆ? ಯಾಕೆಂದರೆ, ಇದು ಈ ಬಾರಿಯ ಐಪಿಎಲ್ ಸರಣಿಯಲ್ಲಿ ಇತಿಹಾಸ ಬರೆಯಲು ಸಜ್ಜಾಗಿದೆ ಈ 18. ಸ್ನೇಹಿತರೇ, ನಿಮಗೆ ಈಗಾಗಲೇ ನಾನು ಏನನ್ನು ಹೇಳಲು ಹೊರಟಿರುವೆ ಅಂತಾ ತಿಳಿದಿರಬಹುದು. ಅದೇ ನಮ್ಮ ಆರ್ಸಿಬಿ ಈ ಬಾರಿ ಮತ್ತೆ ಐಪಿಎಲ್ ಫೈನಲ್ಸ್ ತಲುಪಿರುವ ಸುದ್ದಿ, ಹಾಗೂ ಈ 18ರ ಗುಟ್ಟು ಆರ್ಸಿಬಿಗೆ ಹೇಗೆ ವರವಾಗಲಿದೆ ಎಂಬ ಬಗ್ಗೆ ನೋಡೋಣ ಬನ್ನಿ.
18ರ ಇತಿಹಾಸ ರಾಯಲ್ ಚಾಲೆಂಜರ್ಸ್ ಬೆಂಗಳೂರು, ದೇಶ ಹಾಗೂ ವಿದೇಶಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ತಂಡ. ಈ ತಂಡ ಪ್ರಾರಂಭ ಆಗಿದ್ದು 2008ರಲ್ಲಿ. ಅದಾಗಲೇ 2007ರ ಟಿ-20 ಮೊದಲ ವಿಶ್ವಕಪ್ ಗೆಲ್ಲುವ ಮೂಲಕ ಭಾರತ ಟಿ-20 ಕ್ರಿಕೆಟ್ ಸರಣಿಗೆ ಒಂದು ಹೊಸ ಆಯಾಮವನ್ನು ತಂದುಕೊಟ್ಟಿತ್ತು. ಈ ಚುಟುಕು ಕ್ರಿಕೆಟ್ ರೂಪಾಂತರ ಪ್ರೇಕ್ಷಕರಿಗೆ ಹಾಗೂ ಕ್ರಿಕೆಟ್ ಅಭಿಮಾನಿಗಳಿಗೆ ಒಂದು ರೀತಿಯ ಥ್ರಿಲ್ ತಂದಿತ್ತು. ಹಾಗಾಗಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಅಂದ್ರೆ ಬಿಸಿಸಿಐ ಒಂದು ಹೊಸ ಐಡಿಯಾದೊಂದಿಗೆ ಸೆಪ್ಟೆಂಬರ್ 2007ಕ್ಕೆ ಮುಂಬರುತ್ತದೆ. ಅದೇ ಇಂಡಿಯನ್ ಪ್ರೀಮಿಯರ್ ಲೀಗ್. ಹಲವು ಫ್ರಾಂಚೈಸಿಗಳು, 20 ಓವರ್, ದೇಶ, ವಿದೇಶದ ಗಡಿ ಇಲ್ಲದೆ ತಂಡದ ನಿರ್ಮಾಣ. ಹರಾಜಿನ ಮೂಲಕ ಆಟಗಾರರ ಖರೀದಿ. ಹೀಗೆ ಒಂದು ಹೊಸ ರೀತಿಯ ಕ್ರಿಕೆಟಿಗೆ ದಾರಿ ಮಾಡಿಕೊಟ್ಟಿತು ಐಪಿಎಲ್. So, ಭಾರತದ ವಿವಿಧ ಸಿಟಿಗಳನ್ನು ಪ್ರತಿನಿಧಿಸುವ ಎಂಟು ಫ್ರಾಂಚೈಸಿಗಳು 2008ರಲ್ಲಿ ಮುಂದೆ ಬರುತ್ತವೆ. ಅದರಲ್ಲಿ ಒಂದು ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಇದನ್ನ 24, ಜನವರಿ 2008ಕ್ಕೆ ಮುಂಬೈ ಅಲ್ಲಿ auction ಮಾಡಲಾಗುತ್ತದೆ. ಹಾಗೂ ವಿಜಯ್ ಮಲ್ಯ ಈ ತಂಡವನ್ನು ಖರೀದಿ ಮಾಡುತ್ತಾನೆ. ಈ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2008ರಿಂದ 2025ರವರೆಗೆ ಯಾವುದೇ ಕಪ್ಪು ಚುಕ್ಕೆ ಇಲ್ಲದೆ, ಯಾವ ವರ್ಷವೂ ಬ್ಯಾನ್ ಆಗದೆ 18 ವರ್ಷಗಳೂ ನಿಯತ್ತಾಗಿ ಆಡಿ, ಅಭಿಮಾನಿಗಳನ್ನು ರಂಜಿಸಿದ್ದಾರೆ. ನಾನು ಆಗ ಹೇಳಿದ 18ರ ಗುಟ್ಟಿನಲ್ಲಿ ಇದೂ ಕೂಡ ಒಂದು. 18 ವರ್ಷ ಇದೊಂದು ರೀತಿಯಲ್ಲಿ RCB ಅಭಿಮಾನಿಗಳಿಗೆ ತಾಳ್ಮೆಯನ್ನು ಹೇಳಿಕೊಟ್ಟ ವರ್ಷಗಳಾಗಿದ್ದವು. ಒಬ್ಬವನು RCB ಅಭಿಮಾನಿ ತಾನು ಎಂದರೆ, ನೀವು ತಿಳಿಯಬೇಕು ಆ ವ್ಯಕ್ತಿ ನಿಯತ್ತಿಗೆ ಹಾಗೂ ತಾಳ್ಮೆಗೆ ಇನ್ನೊಂದು ಹೆಸರು ಅಂತಾ. ಇಲ್ಲಿಯ ತನಕ ಒಂದು ಕಪ್ ಗೆಲ್ಲದೆ ಇದ್ದರೂ ಅಭಿಮಾನಿಗಳ ಅಭಿಮಾನ ಇನ್ನೂ ಕಡಿಮೆ ಆಗಿಲ್ಲ. ಇದೊಂದು ರೀತಿಯಲ್ಲಿ 18 ವರ್ಷಗಳ ವನವಾಸ. ಈ ವರ್ಷ ಇದಕ್ಕೆ ಬ್ರೇಕ್ ಬೀಳಲಿದೆ ಎಂಬುದು ಎಲ್ಲರ ವಿಶ್ವಾಸ.
18ರ ಈ ವಿರಾಟರೂಪ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂದಾಕ್ಷಣ ಕಣ್ಣ ಮುಂದೆ ನಿಮಗೆ ಏನು ಬರುತ್ತೆ? ಒಂದು ಆ ರೆಡ್ ಜರ್ಸಿ, ಇನ್ನೊಂದು? ಹೇಳಿ ನೋಡೋಣ…. ಅದು ಕ್ರಿಕೆಟ್ ಸಾಮ್ರಾಜ್ಯದ ಒಬ್ಬ ರಾಜನ ಹೆಸರು, I came, I saw, and I conquered ಅನ್ನೋ ಲೆಕ್ಕದ ಒಬ್ಬ aggressive and passionate ಆಟಗಾರನ ಹೆಸರು. ಆ ಹೆಸರೇ ವಿರಾಟ್ ಕೊಹ್ಲಿ. ಆದರೆ ಒಂದು ನೆನಪಿಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾವುದೇ ಒಬ್ಬ ಆಟಗಾರನಿಂದ ನಿಂತಿಲ್ಲ. ಆರ್ಸಿಬಿ ಎಂಬುವುದು ಒಂದು ದೊಡ್ಡ ಕೋಟೆ ಇದ್ದಂತೆ, ಇಲ್ಲಿ ನಾವು ಯಾವ ಕೋಟೆಯ ಕಲ್ಲನ್ನೂ ಕಡಿಮೆ ಅಂತಾ ಭಾವಿಸುವುದಿಲ್ಲ. ಆದರೆ ಇಷ್ಟು ವರ್ಷಗಳಿಂದ ಕೋಟೆಯ ಮೇಲಿರುವ ಧ್ವಜ ಸ್ತಂಭವನ್ನು ಯಾವತ್ತೂ ಮರೆಯೋಲ್ಲ. ಆ ಧ್ವಜ ಸ್ತಂಭದ ಹೆಸರೇ ವಿರಾಟ್ ಕೊಹ್ಲಿ. 18ಕ್ಕೂ ಇವರಿಗೂ ಏನು ಸಂಬಂಧ ಇದೆ ಸರ್ ಅಂತಾ ಕೆಲವರು ಕೇಳಬಹುದು. ಕೋಹ್ಲಿ ಎಂಬ ಹೆಸರು ಹೇಗೆ ಎದುರಾಳಿ ಬೌಲರ್ ಎದೆಯಲ್ಲಿ ಭಯ ಹುಟ್ಟಿಸುತ್ತದೆಯೋ , ಹಾಗೆ ಅವರ ಜೆರ್ಸಿ ಮೇಲೆ ಇರುವ ಈ 18 ಸಂಖ್ಯೆ, ಅಭಿಮಾನಿಗಳಿಲ್ಲಿ ವಿರಾಟ್ ಮೇಲೆ ಇರುವ ಕ್ರೇಜ್ ಹೆಚ್ಚಿಸುತ್ತದೆ. ಆದರೆ ಯಾಕೆ? ಆ ರೀತಿ ಐಪಿಎಲ್ ಅಲ್ಲಿ ವಿರಾಟ್ ಕೊಹ್ಲಿ ಏನು ಮಾಡಿದ್ದಾರೆ ಅಂತಾ ಅಭಿಮಾನಿಗಳು ಇವರ ಮೇಲೆ ಇಷ್ಟು ಪ್ರೀತಿ ತೋರಿಸುತ್ತಾರೆ? ಬನ್ನಿ ಹೇಳ್ತೀನಿ. · ವಿರಾಟ್ ಕೊಹ್ಲಿ ಅವರು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ ಆಗಿದ್ದಾರೆ. 2025 ರವರೆಗೆ ಅವರು 8,618 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. · ಐಪಿಎಲ್ನಲ್ಲಿ ಅತಿ ಹೆಚ್ಚು ಶತಕಗಳನ್ನು ಅಂದ್ರೆ 8 ಶತಕಗಳನ್ನು ಗಳಿಸಿದ ದಾಖಲೆಯೂ ವಿರಾಟ್ ಕೊಹ್ಲಿ ಅವರ ಹೆಸರಿನಲ್ಲಿದೆ. · ಕೋಹ್ಲಿ ಅವರು ಅತಿ ಹೆಚ್ಚು ಅರ್ಧ ಶತಕಗಳನ್ನು ಅಂದ್ರೆ 63 ಅರ್ಧ ಶತಕ ಗಳಿಸಿದ ಎರಡನೇ ಆಟಗಾರರಾಗಿದ್ದಾರೆ. · 2016 ರ ಐಪಿಎಲ್ ಸೀಸನ್ನಲ್ಲಿ ವಿರಾಟ್ ಕೊಹ್ಲಿ 973 ರನ್ ಗಳಿಸಿದ್ದು, ಇದು ಒಂದೇ ಸೀಸನ್ನಲ್ಲಿ ಯಾವುದೇ ಬ್ಯಾಟ್ಸ್ಮನ್ ಗಳಿಸಿದ ಅತಿ ಹೆಚ್ಚು ರನ್ ಆಗಿದೆ. · ಅವರು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಅಂದ್ರೆ 8 ಸೀಸನ್ಗಳಲ್ಲಿ 500 ಕ್ಕೂ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. · RCB ಗಾಗಿ ಅತಿ ಹೆಚ್ಚು ಬೌಂಡರಿ ಅಂದ್ರೆ 768 ಮತ್ತು 291 ಸಿಕ್ಸರ್ಗಳನ್ನು ಬಾರಿಸಿದ ದಾಖಲೆಯೂ ಅವರ ಹೆಸರಿನಲ್ಲಿದೆ. · ಅವರು 2016 ಮತ್ತು 2024 ರಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಕ್ಕಾಗಿ ಆರೆಂಜ್ ಕ್ಯಾಪ್ ಪ್ರಶಸ್ತಿಯನ್ನು ಗೆದ್ದಿದ್ದರು. · ಹಾಗೂ ವಿರಾಟ್ ಅವರು 2013 ರಿಂದ 2021 ರವರೆಗೆ RCB ತಂಡವನ್ನು ಮುನ್ನಡೆಸಿದರು ಮತ್ತು 2016 ರಲ್ಲಿ ತಂಡವನ್ನು ಫೈನಲ್ಗೆ ಕೊಂಡೊಯ್ದಿದ್ದರು.
ಇದು ವಿರಾಟ್ ಕೊಹ್ಲಿ ಅವರ ಇಲ್ಲಿಯವರೆಗಿನ ಸಾಧನೆ ಮತ್ತು ಇದಕ್ಕಾಗಿಯೇ ಅವರನ್ನು ನಾನು ಕೋಟೆ ಮೇಲಿನ ಧ್ವಜ ಸ್ತಂಭ ಎಂದಿದ್ದು. ಹಾಗಾದರೆ 18 ವರ್ಷಗಳ ನಂತರ ಜೆರ್ಸಿ ನಂಬರ್ 18 ಈ ಸಲ ಕಪ್ ನಮ್ಮದೆ ಅಂತಾ ಕಪ್ ಎತ್ತಿ ಕೊಳ್ಳುವ ದೃಶ್ಯ ನೋಡಲು ಅಭಿಮಾನಿಗಳಿಗೆ ಅವಕಾಶ ಸಿಗಬಹುದಾ?! ಹಾಗೆಯೇ ಈ 18 ವಿರಾಟ್ ಕೊಹ್ಲಿ ಅವರಿಗೆ ಇನ್ನೊಂದು ರೀತಿಯಲ್ಲಿ ಕೂಡ ಸಂಭಂದಿಸಿದೆ. ಏನು ಅದು? ನೀವು ಗೂಗಲ್ ಅಲ್ಲಿ ಟೈಪ್ ಮಾಡಿ, ಐಪಿಎಲ್ ನಲ್ಲಿ ಯಾವುದೇ ಒಂದು ಪ್ಲೇಯರ್ ಬರೋಬ್ಬರಿ 18 ವರ್ಷಗಳ ಕಾಲ, ಎಲ್ಲಿಯೂ ಬ್ರೇಕ್ ಇರದೆ, ಒಂದೇ ಟೀಮ್ ಗೆ ಮಾತ್ರ ಆಡಿದ್ದಾರಾ ಅಂತಾ ಸರ್ಚ್ ಮಾಡಿದ್ರೆ, ಒಂದೇ ಹೆಸರು ಬರುತ್ತೆ, ಅದೇ ಕಿಂಗ್ ಕೋಹ್ಲಿ ಅಂದ್ರೆ ವಿರಾಟ್ ಕೊಹ್ಲಿ ಅವರ ಹೆಸರು. 2008ರಲ್ಲಿ ಐಪಿಎಲ್ ಪ್ರಾರಂಭ ಆದಾಗಿನಿಂದ 2025ರವರೆಗೆ ಒಬ್ಬ ಸಾಮಾನ್ಯ ಆಟಗಾರನಾಗಿ, ನಾಯಕನಾಗಿ, ಮೆಂಟರ್ ಆಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ತನ್ನ ನಿಯತ್ತನ್ನು ತೋರಿಸುತ್ತಿರುವ ಏಕೈಕ ಆಟಗಾರ ಕೋಹ್ಲಿ. ಇವರು RCB ಅಲ್ಲಿ ಇದ್ದು ಈ ವರ್ಷ 18 ವರ್ಷವಾಗಿದೆ. ಹಾಗಾಗಿ, ಸುತ್ತಿ ಬಳಸಿ 18 RCB ಸುತ್ತ ಮುತ್ತವೇ ಓಡಾಡುತ್ತಿದೆ.
ಸ್ನೇಹಿತರೇ, ಇಲ್ಲಿಯ ತನಕ RCB 3 ಬಾರಿ ಐಪಿಎಲ್ ಫೈನಲ್ಸ್ ತಲುಪಿದರೆ, 1 ಬಾರಿ ಚಾಂಪಿಯನ್ಸ್ ಲೀಗ್ ಫೈನಲ್ಸ್ ತಲುಪಿತ್ತು. ಆದರೆ ಪ್ರತಿಬಾರಿಯೂ ರನ್ನರ್ ಅಪ್ ಆಗಿ ಹೊರಬಿದ್ದಿದೆ. · 2009ರಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಫೈನಲ್ನಲ್ಲಿ ಸೋಲುತ್ತಾರೆ. · 2011ರಲ್ಲಿ ಚೆನೈ ಸೂಪರ್ ಕಿಂಗ್ಸ್ ವಿರುದ್ಧ ಫೈನಲ್ ಅಲ್ಲಿ ಸೋಲುತ್ತಾರೆ. · 2016ರಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಫೈನಲ್ನಲ್ಲಿ ಸೋತರು · ಹಾಗೂ 2011ರಲ್ಲಿ ಚಾಂಪಿಯನ್ಸ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋತರು
ಆದರೆ ಈ ಬಾರಿಯ ಐಪಿಎಲ್ ನಲ್ಲಿ RCB ತಂಡದ ಪ್ರದರ್ಶನ ಕಪ್ ಬೆಂಗಳೂರಿಗೆ ಬರಲಿದೆ ಎಂಬ ಎಲ್ಲಾ ಲಕ್ಷಣಗಳನ್ನು ತೋರಿಸುತ್ತಿದೆ.
ಇಷ್ಟಕ್ಕೆ 18ರ ಗುಟ್ಟು ಮುಗಿಯಿತಾ ಅಂತಾ ನೀವು ಕೇಳಿದ್ರೆ, ಇಲ್ಲ ಸ್ನೇಹಿತರೆ, ಇನ್ನೂ ಮುಗಿದಿಲ್ಲ. 18 ಎಂಬುದು RCB ತಂಡಕ್ಕೆ ಯಾಕೆ ವಿಶೇಷ ಎಂದರೆ, ಇನ್ನೂ ಒಂದು ಕಾರಣ ಇದೆ. ಅದು ಏನು? RCB ತಂಡ 18ನೇ ತಾರೀಖಿನಂದು ಆಡಿದ ಯಾವುದೇ ಮ್ಯಾಚ್ ಅನ್ನು ಸೋತಿಲ್ಲ. ಅದರಲ್ಲೂ ಮೇ.18ಕ್ಕೆ ಆದಂತಹ ಯಾವ ಪಂದ್ಯವನ್ನೂ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಿಟ್ಟುಕೊಟ್ಟಿಲ್ಲ. ನಿಜಾನಾ ಇದು ಎಂಬುವವರಿಗೆ ಇಲ್ಲಿದೆ ಕೆಲವು ವಿವರಣೆ.
ಮೇ, 18ರಂದು ನಡೆದ ಇಲ್ಲಿಯ ತನಕದ ಪಂದ್ಯಗಳನ್ನು ಗಮನಿಸಿ. 2013ರಲ್ಲಿ ಮೊದಲ ಬಾರಿಗೆ ಮೇ.18ಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಿದ ಪಂದ್ಯದಲ್ಲಿ RCB 24ರನ್ ಗಳ ಜಯ ಕಂಡಿತು. 2014ರಲ್ಲಿ ಮೇ.18ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವು, 2016 ಮೇ.18ರಂದು ಸನ್ ರೈಸರ್ಸ ಹೈದರಾಬಾದ್ ವಿರುದ್ಧ ಗೆಲುವು, 2023 ಮೇ.18ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವು, 2024ರಲ್ಲಿ ಇದೇ ಮೇ.18ಕ್ಕೆ ಇದೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವು ಪಡೆಯುತ್ತದೆ ನಮ್ಮ RCB. ಎಲ್ಲೋ ಏನೋ ಲಿಂಕ್ ಹೊಡಿತಿದೆ ಅಂತಾ ಅನ್ನಿಸ್ತಾ ಇಲ್ವಾ ನಿಮಗೆ? 18ಕ್ಕೆ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಏನೋ ಒಂದು ಕನೆಕ್ಷನ್ ಇದೆ ಅಂತಾ ಅನ್ನಿಸ್ತಾ ಇಲ್ವಾ? ಅದರಲ್ಲೂ ಮೇ.18ಕ್ಕೆ ಆಡಿದ ಪ್ರತಿ ಆಟದಲ್ಲಿ ವಿರಾಟ್ ಕೊಹ್ಲಿ ಅತ್ಯದ್ಭುತ ಪ್ರದರ್ಶನವನ್ನು ತೋರಿಸಿದ್ದಾರೆ. 2016 ಹಾಗೂ 2023ರಲ್ಲಿ ಶತಕಗಳನ್ನು ಸಿಡಿಸುವ ಮೂಲಕ 18 ನನಗೂ ಸಂಬಂಧಿಸಿದೆ ಅಂತಾ ಪ್ರೂವ್ ಮಾಡಿದ್ದಾರೆ.
ಈ 18 ಇನ್ನು ನಮ್ಮ ಹಿಂದೂಗಳಿಗೆ ಒಂದು ಪವಿತ್ರ ಸಂಖ್ಯೆ. ಯಾಕೆ ಎಂದರೆ, ಹಿಂದೂ ಧರ್ಮದಲ್ಲಿ 18 ಮಹಾಪುರಾಣಗಳು ಇವೆ, 18 ಉಪ ಪುರಾಣಗಳು ಇವೆ, ಮಹಾಭಾರತ ಯುದ್ಧ ನಡೆದಿದ್ದು 18 ದಿನ, ಮಹಾಭಾರತದ ಭಾಗಗಳು 18. ಹೀಗೆ ನಂಬರ್ 18 ಒಂದು ವಿಶೇಷ ಸ್ಥಾನವನ್ನು ನಮ್ಮ ದೇಶದಲ್ಲಿ ಹೊಂದಿದೆ.
ಕೊನೆಯದಾಗಿ 18ರ ರಹಸ್ಯಕ್ಕೆ ಇನ್ನೂ ಒಂದು ಇಂಟ್ರೆಸ್ಟಿಂಗ್ ವಿಷಯವನ್ನು add ಮಾಡ್ತೀನಿ ಕೇಳಿ. ಇವತ್ತು ಐಪಿಎಲ್ ಫೈನಲ್ಸ್ ನಡೆಯುತ್ತಿದೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ ಅಲ್ವಾ ಸರ್ ಅಂತಾ ಕೇಳಿದ್ರೆ, ಈ ವಿಷಯದ ಜೊತೆಗೆ ಇನ್ನೊಂದು ವಿಷಯ ಹೇಳ್ತೀನಿ ಕೇಳಿ. ಇವತ್ತಿನ ದಿನಾಂಕ ಏನು ಹೇಳಿ. 03-06-2025. ಹೌದು ಇವತ್ತು ಇದೇ ದಿನಾಂಕ. ಏನಿವಾಗ? ಅಂತ ನೀವು ಕೇಳಬಹುದು. ಒಂದು ಕೆಲಸ ಮಾಡಿ, ಒಂದು ಪೇಪರ್ ತಗೊಳ್ಳಿ, ಅದರ ಮೇಲೆ 3+6+2+0+2+5 ಅಂತಾ ಬರೆದುಕೊಂಡು, ಈಗ ಅಷ್ಟನ್ನೂ add ಮಾಡಿ. ಎಷ್ಟು ಬರುತ್ತೆ ಹೇಳಿ… ಗೊತ್ತಾಯ್ತಾ? ಉತ್ತರ ನಿಮ್ಮ ಮನಸ್ಸಿನಲ್ಲಿಯೇ ಇಟ್ಕೊಳ್ಳಿ. ಕೊನೆಯದಾಗಿ ಒಂದು ಮಾತು, ಈ ಸಲ ಕಪ್ ನಮ್ಮದೆನೆ…