ತಾರಕ್ ನೋಡಿದ ಸಲ್ಮಾನ್ ಖಾನ್ ದರ್ಶನ್ ಬಗ್ಗೆ ಏನೆಂದ ಗೊತ್ತಾ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೆ ಗೆಲುವಿನ ರುಚಿ ನೋಡಿದ್ದಾರೆ.ದಸರಾಗೆ ಬಿಡುಗಡೆ ಆದ ತಾರಕ್ ಕೌಟುಂಬಿಕ ಪ್ರೇಕ್ಷಕರ ಒಲವನ್ನು ಪಡೆದು ಭರ್ಜರಿ ಕಲೆಕ್ಷನ್ ಮಾಡಿದೆ. ಈಗ ಈ ಚಿತ್ರವನ್ನು ನೋಡಲು ಹಲವಾರು ನಟ ನಟಿಯರು ಉತ್ಸಾಹ ತೋರಿದ್ದಾರೆ. ಬಾಲಿವುಡ್ ನ ಖಾಯಂ ಬ್ಯಾಚುಲರ್ ಸಲ್ಮಾನ್ ಖಾನ್ ಇತ್ತೀಚೆಗೆ ತಾರಕ್ ಚಿತ್ರವನ್ನು ವೀಕ್ಷಿಸಿದ್ದಾರೆ. ತಾರಕ್ ನೋಡಿ ತುಂಬಾ ಸಂತಸಗೊಂಡ ಸಲ್ಲು ಚಿತ್ರ ತುಂಬಾ ಚೆನ್ನಾಗಿದೆ ಎಂದು ಹೊಗಳಿದ್ದಾರೆ. ಅದರಲ್ಲೂ ದರ್ಶನ್ ಬಗ್ಗೆ ಮಾತನಾಡಿದ ಸಲ್ಲು “ದರ್ಶನ್ ಸೂಪರ್ ಸ್ಟಾರ್ . ಅವರು ಯಾವುದೇ ಪಾತ್ರ ಕೊಟ್ಟರೂ ಸಲೀಸಾಗಿ ಮಾಡುತ್ತಾರೆ.ಅವರಿಗೆ ಅವರೇ ಸಾಟಿ” ಎಂದು ಪ್ರಶಂಸಿಸಿದ್ದಾರೆ.













