ಅಮೃತ ಬಿಂದುಗಳು
ಕೇವಲ ಪ್ರಶಂಸೆ, ಕಾಣಿಕೆಗಳಿಂದ ಮಿತ್ರರನ್ನು ಸಂಪಾದಿಸಬೇಡ, ಅವರಿಗೆ ನಿನ್ನ ಪ್ರೇಮದ ವಿವೇಕ ಪೂರ್ಣ ಪರಿಚಯ ಕೊಟ್ಟು ಸಂಪಾದಿಸು. ಗೆಳೆತನ ಮಾಡಿದರೆ ನಮಗಿಂತ ಶ್ರೇಷ್ಠವಾದವರೊಡನೆ ಮಾಡಬೇಕು. ಇಲ್ಲವೇ ಸಮಾನರೊಡನಾದರೂ ಮಾಡಬೇಕು. ಇವೆರಡು ಸಾಧ್ಯವಾಗದಿದ್ದಲ್ಲಿ ಏಕಾಂಗಿಯಾಗಿರುವುದೆ ಲೇಸು. ದುರ್ಮೈತ್ರಿಗಿಂತ ನಿರ್ಮಿತ್ರಿಯ ಲೇಸು. ನಿನ್ನ ಸ್ನೇಹಿತನನ್ನು ಏಕಾಂತದಲ್ಲಿ ನಿಂದಿಸು, ಎಲ್ಲರ , ಎದುರು ಬಣ್ಣಿಸು ನಿಮ್ಮ ಮಿತ್ರರು ಎಂಥವರೆಂಬುದನ್ನು ಹೇಳಿರಿ, ಅಂದರೆ ನೀವು ಎಂತವರೆಂಬುದನ್ನು ನಾನು…













