ಬಡಗುತಿಟ್ಟು ಆಟ.
ತಂಪಾದ ಇಳಿಸಂಜೆಯಲಿ ಕಡಲ ಕಿನಾರೆಯ ಮೇಲೆ ಪಾಳುಗಟ್ಟಿದ ಹಳ್ಳಬಾವಿ ಹೊನಲುಗಳ ದಾಟಿ, ನಟ್ಟ ನಡುದಾರಿ ತೋಟದೊಳಗಡೆಗೆ ಸಾಗಿದೆ;
ದೊರದಲ್ಲಿ ಚಂಡೆಮದ್ಡಳೆ ತಾಳ ಜಾಗಟೆ ಕೊಂಬು ಕಹಳೆಯ ಕೂಗು ಹೆಜ್ಜೆ ಹೆಜ್ಜೆಗೂ ಜೋರಾಗುತ್ತಿತ್ತು.
ಅರೇ ಸಂಜೆಯ ಸಣ್ಣ ಕತ್ತಲ ನಡುವೆ ಮನೆಯ ಅಂಗಳದ ಮುಂದೆ ನಡೆಯುತ್ತಿತ್ತು ಬಯಲಾಟ!
ಕುರ್ಚಿಯ ಮೇಲೆ ಕುಳಿತು ಒಂದು ಕಾಲನ್ನ ನೆಲದ ಹಸಿಹುಲ್ಲ ಮೇಲೊರಿ; ಕುರ್ಚಿಯ ಕಾಲು ಒಂದು ಕೆಡೆ ತುಂಡಾದ ಕಾರಣ ಮೇಳದ ಲಯಕ್ಕೆ ಆಕಡೆ ಈಕಡೆ ಟಕ್ಕಾಟಕ್ಕಿಸುತ್ತ ಕಣುಗಳ ವೇದಿಕೆಯ ಮೇಲಿಟ್ಟೆ, ಅಥ ಭಾಗವತರು ಹಾಡಲು ಇಥ ಬಲಭೀಮ ಗದೆ ಹಿಡಿದು ತಿರುವಿ ಹೂಂಕರಿಸಲು ವೇದಿಕೆಯ ಮೇಲೆ ಪ್ರತಿ ಕ್ಷಣವೂ ಸಂಭ್ರಮದಂತ್ತಿತ್ತು!




















