Mobile Heating Problem : ಮೊಬೈಲ್ ಹೀಟಿಂಗ್ ಸಮಸ್ಯೆಗೆ ಇಂದೇ ಹೇಳಿ ಬೈ-ಬೈ: ಈ 8 ಸರಳ ಸೂತ್ರಗಳನ್ನು ಪಾಲಿಸಿ..!
ಬೇಸಿಗೆ ಬಂತೆಂದರೆ ಸಾಕು, ಸುಡುವ ಬಿಸಿಲಿಗೆ ಮನುಷ್ಯರಾದ ನಾವೇ ಹೈರಾಣಾಗಿಬಿಡುತ್ತೇವೆ. ಆದರೆ, ನಮ್ಮ ಜೊತೆಗೇ ಇರುವ ನಮ್ಮ ‘ಜೀವದ ಗೆಳೆಯ’ ಸ್ಮಾರ್ಟ್ಫೋನ್ ಕಥೆ ಏನು? ಹೌದು, ಹೊರಗಿನ ತಾಪಮಾನ ಏರುತ್ತಿದ್ದಂತೆ ನಾವು ಬಳಸುವ ಮೊಬೈಲ್ ಫೋನ್ಗಳು ಕೂಡ ಅತಿಯಾಗಿ ಬಿಸಿಯಾಗಲು (Mobile Heating Problem) ಶುರುವಾಗುತ್ತವೆ. ಫೋನ್ ಅತಿಯಾಗಿ ಕಾಯುವುದು ಕೇವಲ ಕಿರಿಕಿರಿ ಮಾತ್ರವಲ್ಲ, ಇದು ಬ್ಯಾಟರಿ ಆಯಸ್ಸನ್ನು ಕುಂದಿಸುತ್ತದೆ ಮತ್ತು ಫೋನ್ ಸ್ಲೋ ಆಗುವಂತೆ ಮಾಡುತ್ತದೆ. ಕೆಲವೊಮ್ಮೆ ಇದು ಅಪಾಯಕಾರಿ…














