ಅಡುಗೆಯ ಕೌಶಲ್ಯತೆ
ಅಡುಗೆ ಮಾಡುವ ಕೆಲಸವು ಬಹಳಷ್ಟು ಜನರಿಗೆ ಕಷ್ಟ ಅಥಾವ ಹರಸಾಹಸವೇ ಹೌದು! ನನ್ನ ಅನುಭವವು ಇದಕ್ಕಿಂತ ಮೀರಿದ್ದು ಮೊದಲಿಗೆ ಏನು ಯಾವುದಕ್ಕೆ ಹಾಕಬೇಕು ಹೇಗೆ ಬಳಸಬೇಕು? ಎಂಬುದು ತಿಳಿಯದಿರುವ ದಿನಗಳು ಇವೆ...ಮೊದಲು ನಾನು ಅಡುಗೆ ಕಲಿಯುವಾಗ ಸೀದಿರುವ ಪಾತ್ರೆಗಳು ಅಡುಗೆಗಳು ನೆನೆಪಿಗೆ ಬಂದಿತ್ತು ಇದೆ ರೀತಿಯಾದ ಅನುಭವ ನಿಮಗು ಇರಬಹುದು.
ಹೌದು, ಬಹಳಷ್ಟು ಜನರಿಗೆ ಉಂಟಾಗುವ ಸಮಸ್ಯೆ ಇದು. ಅಂದು ಸೀದು ಹೋದ ಪಾತ್ರೆಯಿಂದ ಬೈಗುಳ ತಿಂದದಕ್ಕೆ ನಾನು ಅಡುಗೆ ಕಲಿಯಲು ಸಾಧ್ಯವಾಯಿತು. ಅಳತೆ, ತರಕಾರಿಯ ಹೆಸರುಗಳು ಇತಿ ಮಿತಿ ಎಲ್ಲವು ತಿಳಿಯುವಂತೆ ಮಾಡಿತು. ಏನೇ ಇರಲಿ ತಪ್ಪು ಮಾಡಿವುದು, ತಿದ್ದು ಕೊಳ್ಳಲು ಎಂಬುದು ಅಲ್ಲಿ ನೆನೆಪಾಯಿತು.ಯೂಟ್ಯುಬ್ ವಿಡಿಯೋಗಳನ್ನು ನೋಡಿ ಕಲೆತುಕೊಂಡಿದ್ದು ಆನೇಕ, ಆದರೆ ಮನೆಯಲ್ಲಿ ಬೈಗುಳ ತಿಂದು ಕಲಿತದ್ದೇ ತಮಷೆಯಾಗಿದೆ.ಇಂದಿಗೂ ನಾನು ಮಾಡಿದ ಅಡುಗೆ ಯಾವುದು ಗೊತ್ತೇ…? ಅನ್ನ ಮತ್ತು ರಸಂ! ಹೌದು! ಅನ್ನ ನೋಡಲು ಕಪ್ಪು ಹಾಗೂ ರಸಂ ಬಿಳಿಯ ಬಣ್ಣದಲ್ಲಿ ಇತ್ತು. ಅವತ್ತಿನಿಂದ ಇಂದಿನ ವರೆಗೂ ಅಡುಗೆಯನ್ನು ಬಹಳಷ್ಟು ಗಂಭೀರವಾಗಿ ಕಲಿತು ಬಂದೆ. ಆದರೆ ರಸಂ ಮಾಡುವ ಧೈರ್ಯವನ್ನು ಬೆಳೆಸಿಕೊಳ್ಳಲಿಲ್ಲವಷ್ಟೆ. ನನಗೆ ಬೇಕಿರುವ ಅಡುಗೆಗಳನ್ನು ಮಾಡಿದ್ದೇನೆ. ಏನೇ ಇರಲಿ ಮೊದಲಿಗೆ ಕಲಿತ ಅಡುಗೆ ಬಹಳಷ್ಟು ಅನುಭವ ಹಾಗೂ ಕಲಿಯಲು ದಾರಿಯನ್ನು ಮಾಡಿಕೊಡುತ್ತದೆ. ನೀವು ಸಹ ತಪ್ಪು ಗಳನ್ನು ಮಾಡಿದ್ದಾದರೆ, ಸುಮ್ಮನೆ ಕೂರದೆ ಮತ್ತೇ ಮತ್ತೇ ಪ್ರಯತ್ನ ಮಾಡುವುದರಿಂದ ಕಲಿಯಲು ದೊಡ್ದ ಸಹಾಯ ಮಾಡಿಕೊಳುವ ದಾರಿಯಾಗುತ್ತದೆ. ಅಡುಗೆ ಮಾಡುವುದು ಕಲೆಯುವುದೂ ಹೌದು! ಜೊತೆಗೆ ಕೌಶಲ್ಯವು ಹೌದು!
By Meghana N








