• ಸಿರುಗುಪ್ಪ ಅಕ್ರಮ ಮರಳು ಸಾಗಣಿಕೆ ಟ್ರ್ಯಾಕ್ಟರ್ ವಶಕ್ಕೆ ತಾಲೂಕಿನ ರಾರಾವಿ ಹಗರಿ ನದಿ ಪಾತ್ರದಿಂದ ಅಕ್ರಮ ಮರಳು ತುಂಬಿಕೊಂಡು ಸಾಗಣಿಕೆ ಮಾಡುತ್ತಿದ್ದ ವೇಳೆಯಲ್ಲಿ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಹಠಾತ್ ದಾಳಿ ನಡೆಸಿ ಮರಳು ತುಂಬಿಕೊಂಡಿರುವ ಒಂದು ಟ್ರ್ಯಾಕ್ಟರ್ ಸಿರುಗುಪ ಹಿಡಿದು ನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ತಾಲೂಕಿನಾದ್ಯಂತ ಅವ್ಯಾಹತವಾಗಿ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿದೆ ಎಂಬ ದೂರು ಕೇಳಿ ಬಂದ ಮೇಲೆ ಈ ಅಕ್ರಮ ಕುರಿತಾದ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಅಧಿಕಾರಿ ನಾಗೇಂದ್ರಪ್ಪ ಮತ್ತು ತಂಡದ ಅಧಿಕಾರಿಗಳು ಬೆಳ್ಳಂ ಬೆಳಿಗ್ಗೆ ಕಾರ್ಯಾಚರಣೆ ನಡೆಸಿ ಒಂದು ಟ್ರಾಕ್ಟರ್ ವಾಹನ ಹಿಡಿದು ಸಾಗಾಣಿಕೆ ವೇಳೆಯಲ್ಲಿ ಹಿಡಿದು ವಶಕ್ಕೆ ಪಡೆದಿದ್ದಾರೆ. #siruguppa #bagewadi #bellary #bellary #j3tvkannada #j3 #j3t (at Siruguppa) https://www.instagram.com/p/CasEkwcq5nw/?utm_medium=tumblr


















