ಘನ ತ್ಯಾಜ್ಯ ವಿಂಗಡಣೆಯ ಕುರಿತು ಜಾಗೃತಿ ಸಿರುಗುಪ್ಪ ನಗರದಲ್ಲಿ ನಗರಸಭೆಯ ಸ್ವಚ್ಛ ಭಾರತ ಮಿಷನ್ ನಗರ ಯೋಜನೆಯ ವತಿಯಿಂದ ಪೌರಕಾರ್ಮಿಕರು ಸ್ವಚ್ಛ ಸಿರುಗುಪ್ಪ ಜಾಗೃತಿ ಜಾಥಾ ನಡೆಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಜಾಥಾ ಮನೆಗಳಿಗೆ, ಅಂಗಡಿ, ಬಾರ್ ರೆಸ್ಟೋರೆಂಟ್ಗಳಿಗೆ, ಟೀ ಅಂಗಡಿಗಳಿಗೆ ಕಸ ಬೇರ್ಪಡಿಸುವಿಕೆಯ ಮಾರ್ಗಸೂಚಿ ಪತ್ರಗಳನ್ನು ಹಂಚಿದರು. ಘನ ತ್ಯಾಜ್ಯ ವಿಂಗಡಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು. #siruguppa #bellary #j3tv (at Siruguppa) https://www.instagram.com/p/CaysNYPKCJ3/?utm_medium=tumblr










