ಬುರ್ದ್ವಾನ್ ಸ್ಫೋಟ: ಜಮಾತ್-ಉಲ್-ಮುಜಾಹಿದ್ದಿನ್ ಸಂಘಟನೆಯ ಮತ್ತೊಬ್ಬ ಉಗ್ರನ ಸೆರೆ
ಬುರ್ದ್ವಾನ್ ಸ್ಫೋಟ: ಜಮಾತ್-ಉಲ್-ಮುಜಾಹಿದ್ದಿನ್ ಸಂಘಟನೆಯ ಮತ್ತೊಬ್ಬ ಉಗ್ರನ ಸೆರೆ
ಜಮಾತ್-ಉಲ್-ಮುಜಾಹಿದ್ದಿನ್ ಬಾಂಗ್ಲಾದೇಶ (JMB) ಉಗ್ರ ಸಂಘಟನೆಯ ಪ್ರಮುಖ ಸದಸ್ಯನನ್ನು ಜಾರ್ಖಂಡ್ ಭಯೋತ್ಪಾದನ ನಿಗ್ರಹ ದಳ (ATS) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈತ 2014ರ ಅಕ್ಟೋಬರ್ನಲ್ಲಿ, ಪಶ್ಚಿಮ ಬಂಗಾಳದ ಬುರ್ದ್ವಾನ್ನಲ್ಲಿ ಸಂಭವಿಸಿದ್ದ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳ ಒಬ್ಬನಾಗಿದ್ದ.
ಖಚಿತ ಮಾಹಿತಿ ಮೇರೆಗೆ JMB ಉಗ್ರ ಸಂಘಟನೆಯ ಕಾರ್ಯಕರ್ತ, ತಾರೀಖುಲ್ ಇಸ್ಲಾಂ ಅಲಿಯಾಸ್ ಸಾದಿಕ್ನನ್ನು ಜಾರ್ಖಂಡ್ನಲ್ಲಿ ವಶಕ್ಕೆ ಪಡೆಯಲಾಗಿದೆ.…