ಅತ್ತಹಳ್ಳಿ: 28 ವರ್ಷಗಳಾದರೂ ಮಾಸದ ಬಾಲ್ಯದ ಸಹಪಾಠಿಗಳ ಗೆಳೆತನ- ಸ್ನೇಹ ಮಿಲನದಲ್ಲಿ ಮಿಂದೆದ್ದ ಫ್ರೆಂಡ್ಸ್
ಗೆಳೆಯ- ಗೆಳತಿಯರೆಂದರೆ ಎಲ್ಲ. ಕಷ್ಟ – ಸುಖಗಳಲ್ಲಿ ಕೈ ಹಿಡಿಯುವ, ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳುವ, ತಮಾಷೆ ಮಾಡುವ, ರೇಗಿಸುವ ಬಂಧ. ಈ ಬಂಧ ಎಲ್ಲ ಸಂಬಂಧನಗಳನ್ನು ಮೀರಿದ ಅನುಬಂಧ. ಹೌದು! ಫ್ರೆಂಡ್ಗಳ ಜತೆಗಿನ ಈ ಸಲುಗೆ ಕೆಲವೊಮ್ಮೆ ನಮ್ಮ ರಕ್ತಸಂಬಂಧಿಗಳ ಮನೆಯವರ ನಡುವೆ ಕೂಡ ಕಾಣಲು ಸಾಧ್ಯವಿಲ್ಲ. ಪಾರ್ಟಿ ಮಾಡುವಾಗ, ಸಿನಿಮಾಗೆ ಹೋಗುವಾಗ, ಬೈಕ್ನಲ್ಲಿ ಲಾಂಗ್ ರೈಡ್ ಹೋಗುವಾಗ ಫ್ರೆಂಡ್ಗಳ ಸಾಥ್ ಇದ್ದರಂತೂ ಸ್ವರ್ಗಕ್ಕೆ ಮೂರೇ ಗೇಣು ಎನ್ನುವ ರೀತಿ ಬಹಳ ದಿನಗಳ ಕಾಲ ನೆನಪಿನಲ್ಲಿ…


















