ವಿಟ್ಲ : ‘ಸಮಸ್ತ’ ಹನೀಫಿ ಉಲಮಾ ಒಕ್ಕೂಟದಿಂದ ಮದ್ರಸ ಅಧ್ಯಾಪಕರಿಗೆ ಆಹಾರದ ಕಿಟ್ ವಿತರಣೆ ವಿಟ್ಲ : ಅ.8 ಇಂದಿನ ಸಂದಿಗ್ಧ ಘಟ್ಟದಲ್ಲಿ ಕೆಲಸ ಮತ್ತು ವೇತನ ವಿಲ್ಲದೆ ಸಂಕಷ್ಟದಲ್ಲಿರುವ ಸುಮಾರು ಐವತ್ತಕ್ಕೂ ಮಿಕ್ಕಿದ ಮದ್ರಸ ಅಧ್ಯಾಪಕರಿಗೆ ಕರ್ನಾಟಕ ರಾಜ್ಯ 'ಸಮಸ್ತ' ಹನೀಫಿ ಉಲಮಾ ಒಕ್ಕೂಟದ ವತಿಯಿಂದ ದಿನ ಬಳಕೆಯ ದಿನಸಿ ಸಾಮಾನುಗಳ ಕಿಟ್ ಗಳನ್ನು ಹಾಗೂ ಎರಡು ಹೆಣ್ಮಕ್ಕಳ ವಿವಾಹ ಕಾರ್ಯಕ್ಕೆ ಧನಸಹಾಯವನ್ನು ಇಂದು ವಿಟ್ಲ ದಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿತರಿಸಲಾಯಿತು.















