ಸೌತೆಕಾಯಿ ಗಲಾಟೆ: ತಂಗಿ ಕುತ್ತಿಗೆ ಕೊಯ್ದು ಭೀಕರವಾಗಿ ಕೊಲೆ ಮಾಡಿದ ಅಣ್ಣ
ಕೊಳ್ಳೇಗಾಲ: ಕೇವಲ ಸೌತೆಕಾಯಿಗಾಗಿ ಅಣ್ಣನೊಬ್ಬ ತನ್ನ ತಂಗಿಯ ಕುತ್ತಿಗೆಯನ್ನು ಕತ್ತಿಯಿಂದ ಕೊಯ್ದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಈದ್ಗಾ ಮೊಹಲ್ಲದಲ್ಲಿ ನಡೆದಿದೆ. ಐಮನ್ ಬಾನು ಹತ್ಯೆಯಾದ ಯುವತಿ. ಆಕೆಯನ್ನು ಹತ್ಯೆಗೈದ ಹಂತಕ ಸೋದರ ಫರ್ಮಾನ್ ಪಾಷಾ ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿ ಅಣ್ಣನ ಮಗನಿಗೆ ಕೊಲೆ ಆರೋಪಿ ಫರ್ಮಾನ್ ಪಾಷಾ ಸೌತೆಕಾಯಿ ತಿನಿಸುತ್ತಿದ್ದ. ಮಗನಿಗೆ ಜ್ವರ ಇದೆ ತಿನ್ನಿಸಬೇಡ ಎಂದು ಆತನ ಅತ್ತಿಗೆ ಹೇಳಿದ್ದಾಳೆ. ಇದೆ…









