Viral Video : ವಂದೇ ಭಾರತ್ ರೈಲಿನಲ್ಲಿ ಅಪ್ಪ ಕಲಿಸಿದ ‘ಸ್ವಚ್ಚತೆ’ ಪಾಠ: ಮಗ ಚೆಲ್ಲಿದ ಕಸವನ್ನೇ ಮಗನಿಂದ ಹೆಕ್ಕಿಸಿದ ತಂದೆಯ ವೀಡಿಯೋ ವೈರಲ್!
“ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ” ಎಂಬ ಮಾತು ನೂರಕ್ಕೆ ನೂರರಷ್ಟು ನಿಜ. ಮಕ್ಕಳಿಗೆ ಬಾಲ್ಯದಲ್ಲಿಯೇ ಉತ್ತಮ ಸಂಸ್ಕಾರ ಮತ್ತು ನಾಗರಿಕ ಪ್ರಜ್ಞೆಯನ್ನು ಕಲಿಸಿದರೆ, ಅವರು ಬೆಳೆದು ದೊಡ್ಡವರಾದ ಮೇಲೆ ಜವಾಬ್ದಾರಿಯುತ ಪ್ರಜೆಗಳಾಗುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ವಂದೇ ಭಾರತ್ ರೈಲಿನಲ್ಲಿ ನಡೆದ (Viral Video) ಒಂದು ಪುಟ್ಟ ಘಟನೆ ಈಗ ಇಡೀ ದೇಶದ ಗಮನ ಸೆಳೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಒಬ್ಬ ತಂದೆ ತನ್ನ ಮಗನಿಗೆ ಕಲಿಸಿದ…










