ಬೀಡನಹಳ್ಳಿಯಲ್ಲಿ ಸಡಗರ ಸಂಭ್ರಮದಿಂದ ಜರುಗಿದ ಮಾರಮ್ಮನ ದೇವಿಯ ವೀರಹಬ್ಬ
ಬೀಡನಹಳ್ಳಿ: ತಿ.ನರಸೀಪುರ ತಾಲೂಕು ಬನ್ನೂರು ಹೋಬಳಿಯ ಬೀಡನಹಳ್ಳಿ ಗ್ರಾಮ ದೇವತೆ ಬೀಡನಹಳ್ಳಿ ಮಾರಮ್ಮನ ದೇವಿಯ ವೀರಹಬ್ಬ ಸಡಗರ ಸಂಭ್ರಮದಿಂದ ಜರುಗಿತು. ಗ್ರಾಮದಲ್ಲಿ ಪ್ರತಿವರ್ಷದಂತೆ ಕಡೆ ಕಾರ್ತಿಕ ಸೋಮವಾರದ ನಂತರ ಜರುಗುವ ವೀರಹಬ್ಬ ಡಿ.3 ಮತ್ತ ಡಿ.4ರಂದು ಗ್ರಾಮದ ಮುಖಂಡರು ಆಯೋಜನೆ ಮಾಡಿದ್ದು, ಅದರಂತೆ ಸಂಭ್ರಮ ಸಡಗರದಿಂದ ನರವೇರಿತು. ಬನ್ನೂರು ಹೆಗ್ಗೆರೆಯಿಂದ ಮಂಗಳವಾರ ಸಂಜೆ ಮಜ್ಜನದ ಗಂಗೆ ತಂದು ಪೂಜೆಗಳನ್ನು ಕಟ್ಟಲಾಯಿತು. ಬುಧವಾರ ಮುಂಜಾನೆ ಪೂಜೆಗಳನ್ನು ಹೂ ಹೊಂಬಾಳೆಯಿಂದ ಅಲಂಕರಿಸಿ…













