Buy groceries online and all your food, household essentials & personal care products at our store at the best prices and get home delivery
Sade Olutola

shark vs the universe
Show & Tell

No title available
untitled

tannertan36
Sweet Seals For You, Always
𓃗

roma★

titsay
tumblr dot com

bliss lane
🩵 avery cochrane 🩵
2025 on Tumblr: Trends That Defined the Year
YOU ARE THE REASON

Kiana Khansmith
Keni
cherry valley forever
todays bird

#extradirty
seen from Croatia
seen from Bangladesh

seen from United States

seen from Malaysia

seen from United States
seen from Türkiye
seen from Tunisia
seen from Indonesia
seen from Vietnam

seen from Vietnam
seen from United States

seen from Uzbekistan
seen from India
seen from Canada
seen from Saudi Arabia
seen from Algeria

seen from United States

seen from Vietnam
seen from Jamaica
seen from United Kingdom
@henrybolt1-blog
Buy groceries online and all your food, household essentials & personal care products at our store at the best prices and get home delivery
Buy groceries online and all your food, household essentials & personal care products at our store at the best prices and get home delivery
Buy groceries online and all your food, household essentials & personal care products at our store at the best prices and get home delivery
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ?
ನವದೆಹಲಿ: ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಿಸಲು ಎನ್ ಡಿಎ ನಿರ್ಧರಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.ರಾಷ್ಟ್ರಪತಿ ಚುನಾವಣೆಯಲ್ಲಿ ಸುಷ್ಮಾ ಸ್ವರಾಜ್ ಅವರನ್ನು ಎನ್'ಡಿಎ ಅಭ್ಯರ್ಥಿಯನ್ನಾಗಿ ನಿಲ್ಲಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ನ್ಯೂಸ್ 18 ತನ್ನ ವರದಿಯಲ್ಲಿ ಉಲ್ಲೇಖಿಸಿದೆ.ರಾಷ್ಟ್ರಪತಿ ಸ್ಥಾನಕ್ಕೆ ಬಿಜೆಪಿ ಇಟ್ಟುಕೊಂಡಿರುವ ಎಲ್ಲಾ ಮಾನದಂಡಗಳು ಸುಷ್ಮಾ ಅವರಿಗೆ ಸರಿಹೊಂದುತ್ತಿವೆ. ಎಲ್ಲಾ ಪಕ್ಷಗಳು ಸೇರಿ ಒಮ್ಮತದಿಂದ ರಾಷ್ಟ್ರಪತಿ ಆಯ್ಕೆ ಮಾಡಬೇಕೆಂಬ ಬಿಜೆಪಿ ಪ್ರಯತ್ನಕ್ಕೆ ಸುಷ್ಮಾ ಸ್ವರಾಜ್ ಸೂಕ್ತ ವ್ಯಕ್ತಿ ಆಗಬಹುದೆಂಬ ಲೆಕ್ಕಾಚಾರವೂ ಇದೆ. ಏಕೆಂದರೆ ಮಮತಾ ಬ್ಯಾನರ್ಜಿ, ನವೀನ್ ಪಟ್ನಾಯಕ್ ಸೇರಿದಂತೆ ವಿಪಕ್ಷಗಳು ಸುಷ್ಮಾ ಸ್ವರಾಜ್ ಅವರನ್ನು ವಿರೋಧಿಸುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್, ಜಾರ್ಖಂಡ್ ರಾಜ್ಯಪಾಲರಾದ ದ್ರೌಪದಿ ಮುರ್ಮು, ಎಲ್'ಕೆ ಆಡ್ವಾಣಿ, ಮುರಳಿ ಮನೋಹರ್ ಜೋಷಿ ಅವರ ಹೆಸರುಗಳು ಕೇಳಿ ಬರುತ್ತಿವೆ.
ವರ್ಜಿನಿಯಾ ದಾಳಿ: ಗುಂಡು ಹಾರಿಸಿದ ವ್ಯಕ್ತಿಯ ಹತ್ಯೆಗೈದ ಪೊಲೀಸರು
ವಾಷಿಂಗ್ಟನ್: ಸಂಸದರ ನಡುವೆ ನಡೆಯಲಿದ್ದ ವಾರ್ಷಿಕ ಬೇಸ್ ಬಾಲ್ ಪಂದ್ಯಕ್ಕಾಗಿ ಅಭ್ಯಾಸ ನಿರತರಾಗಿದ್ದ ಅಮೆರಿಕದ ರಿಪಬ್ಲಿಕನ್ ಪಕ್ಷದ ಹಿರಿಯ ಸಂಸದನ ಮೇಲೆ ಗುಂಡಿನ ದಾಳಿ ನಡೆಸಿದ್ದ ವ್ಯಕ್ತಿಯನ್ನು ಪೊಲೀಸರು ಹತ್ಯೆ ಮಾಡಿದ್ದಾರೆ.ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು ಜೇಮ್ಸ್ ಟಿ ಹೊಡ್ಗ್'ಕಿನ್ಸನ್ ಎಂದು ಗುರ್ತಿಸಲಾಗಿದ್ದು, ಈತ ಬೆಲ್ಲೆವಿಲ್ಲೆಯ ನಿವಾಸಿಯಾಗಿದ್ದಾನೆ. ಈತ ಎಡಪಂಥೀಯ ಪಕ್ಷದ ನಾಯಕ ಸೆನೇಟರ್ ಬರ್ನೀ ಸ್ಯಾಂಡರ್ಸ್ ಅವರ ಬೆಂಬಲಿಗನಾಗಿದ್ದಾನೆ. ಹತ್ಯೆಯಾದ ದಾಳಿಕೋರ ಹೊಡ್ಗ್'ಕಿನ್ಸನ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರೋಧಿ ನಿಲುವು ಹೊಂದಿದ್ದ ಎಂದು ಹೇಳಲಾಗುತ್ತಿದೆ. ಹೊಡ್ಗ್'ಕಿನ್ಸನ್ ಸಾಮಾಜಿಕ ಜಾಲತಾಣಗಳಲ್ಲಿ ಚುರುಕಾಗಿದ್ದ. ಇದಕ್ಕೆ ಸಾಕ್ಷಿಯೆಂಬಂತೆ ಟ್ರಂಪ್ ವಿರುದ್ಧ ಹೊಡ್ಗ್'ಕಿನ್ಸನ್ ಹಲವು ಪೋಸ್ಟ್ ಗಳನ್ನು ಹಾಕಿದ್ದು, ರಿಪಬ್ಲಿಕನ್ ಪಕ್ಷವನ್ನು ಕೊನೆಗೊಳಿಸಬೇಕು, ಡೊನಾಲ್ಡ್ ಟ್ರಂಪ್ ನನ್ನ ಅಧ್ಯಕ್ಷನಲ್ಲ ಎಂದು ಹೇಳಿಕೊಂಡಿರುವುದು ಕಂಡುಬಂದಿದೆ. ವಾಷಿಂಗ್ಟ್'ನ ನ ಉಪನಗರವೊಂದರಲ್ಲಿ ಸಂಸದರು ಅಭ್ಯಾಸದಲ್ಲಿ ತೊಡಗಿದ್ದ ವೇಳೆ, ವ್ಯಕ್ತಿಯೊಬ್ಬ 50 ಬಾರಿ ಗುಂಡು ಹಾರಿಸಿದ್ದ. ಈ ಪೈಕಿ ಒಂದು ಗುಂಡು ಹಿರಿಯ ಸಂಸದ ಸ್ಟೀವ್ ಸ್ಕೇಲಿಸ್ ಅವರ ಪೃಷ್ಠಕ್ಕೆ ತಗುಲಿತ್ತು,ಗುಂಡಿನ ದಾಳಿ ಬಳಿಕ ಕುಸಿದು ಬಿದ್ದ ಸ್ಕೇಲಿಸ್ ಅವರು, ಆಗಂತುಕನ ಗುಂಡಿನ ದಾಳಿ ನಡೆಯುತ್ತಿರುವಾಗಲೇ ತೆವಳಿಕೊಂಡು ಸುರಕ್ಷಿತ ಜಾಗಕ್ಕೆ ಬಂದಿದ್ದರು ಎಂದು ಸ್ಥಳದಲ್ಲಿದ್ದ ಮತ್ತೊಬ್ಬ ಸಂಸದ ಮೊ ಬ್ರೂಕ್ಸ್ ತಿಳಿಸಿದ್ದಾರೆ. ಪ್ರಸ್ತುತ ಸ್ಕೇಲಿಸ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಪರಿಸ್ಥಿತಿ ಬಗ್ಗೆ ನಿಗಾಯಿರಿಸಿದ್ದೇನೆಂದು ಟ್ರಂಪ್ ಅವರು ಹೇಳಿದ್ದಾರೆ.
ಫ್ರಿಡ್ಜ್ ಸ್ಫೋಟವೇ ಲಂಡನ್ ಗ್ರೆನ್ ಫೆಲ್ ಟವರ್ ಅಗ್ನಿ ದುರಂತಕ್ಕೆ ಕಾರಣ?
ಲಂಡನ್: ಸುಮಾರು 13 ಮಂದಿಯ ಸಾವಿಗೆ ಕಾರಣವಾದ ಲಂಡನ್ ನ ವಸತಿ ಸಮುಚ್ಛಯದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡಕ್ಕೆ ಫ್ರಿಡ್ಜ್ ಸ್ಫೋಟವೇ ಕಾರಣ ಎಂದು ಹೇಳಲಾಗುತ್ತಿದೆ.ಲಂಡನ್ ಪೊಲೀಸರು ನಡೆಸಿರುವ ಪ್ರಾಥಮಿಕ ತನಿಖೆಯಾಧಾರಿತ ತಿಳಿದುಬಂದ ಅಂಶಗಳ ಅನ್ವಯ ನಾರ್ಥ್ ಕೆನ್ಸಿಂಗ್ಟನ್ ನಲ್ಲಿರುವ ಲಾಟಿಮರ್ ರಸ್ತೆಯ ಲ್ಯಾಂಕೆಸ್ಟರ್ ವೆಸ್ಟ್ ಎಸ್ಟೇಟ್ ನ ಆವರಣದಲ್ಲಿರುವ ಗ್ರೆನ್ ಫೆಲ್ ಟವರ್ ಕಟ್ಟಡದ ನಾಲ್ಕನೇ ಅಂತಸ್ತಿನ ಆಪಾರ್ಟ್ ಮೆಂಟ್ ವೊಂದರಿಂದ ಪ್ರಿಡ್ಜ್ ಸ್ಫೋಟವಾದ ಶಬ್ದ ಕೇಳಿತ್ತು. ಸ್ಫೋಟದಿಂದಾಗಿ ಹೊತ್ತಿದ್ದ ಬೆಂಕಿ ಬಳಿಕ ಇಡೀ ಕಟ್ಟಡವನ್ನು ಆವರಿಸಿತ್ತು ಎಂದು ತಿಳಿದುಬಂದಿದೆ.ಆಪಾರ್ಟ್ ಮೆಂಟ್ ನ ನಾಲ್ಕನೇ ಟವರ್ ನ ನಿವಾಸಿ ಸೋಫಿಯಾ ವಾಲ್ಡನ್ ಎಂಬುವವರು ನೀಡಿರುವ ಮಾಹಿತಿಯಂತೆ ತಮ್ಮ ಪಕ್ಕತ ಆಪಾರ್ಟ್ ಮೆಂಟ್ ನ ವ್ಯಕ್ತಿಯೊಬ್ಬರು ಪ್ರಿಡ್ಜ್ ಸ್ಫೋಟವಾದ ಬಗ್ಗೆ ಹೊರಗೆ ಬಂದು ಹೇಳುತ್ತಿದ್ದರು. ಇದಾದ ಕೆಲವೇ ನಿಮಿಷಗಳಲ್ಲಿ ಬೆಂಕಿ ಹೊತ್ತಿಕೊಂಡಿತ್ತು ಎಂದು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಗ್ನಿಶಾಮಕ ಸಿಬ್ಬಂದಿ ಈಗಷ್ಟೇ ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಪ್ರಸ್ತುತ ತನಿಖೆ ನಡೆಸಲಾಗುತ್ತಿದ್ದು, ಈಗಲೇ ಏನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.ಕನಿಷ್ಟ 12 ಮಂದಿ ಸಾವುಇನ್ನು ಗ್ರೆನ್ ಫೆಲ್ ಟವರ್ ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಢದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 12ಕ್ಕೇರಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಕಟ್ಟಡದಲ್ಲಿ ಬೆಂಕಿ ನಂದಿಸಲಾಗಿದೆಯಾದರೂ, ತಟ್ಟಡದ ಅವಶೇಷಗಳಡಿಯಲ್ಲಿ ಯಾರಾದರೂ ಇದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.
ಅಮೆರಿಕದಲ್ಲಿ ಗುಂಡಿನ ದಾಳಿ: ರಿಪಬ್ಲಿಕನ್ ಪಕ್ಷದ ಸಂಸದ ಸೇರಿ ಹಲವರಿಗೆ ಗಾಯ
ವಾಷಿಂಗ್ಟನ್: ಅಮೆರಿಕದ ವರ್ಜೀನಿಯಾದ ಅಲೆಕ್ಸಾಂಡ್ರಿಯಾದಲ್ಲಿ ದುಷ್ಕರ್ಮಿಯೊಬ್ಬ ಬುಧವಾರ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ರಿಪಬ್ಲಿಕನ್ ಪಕ್ಷದ ಹಿರಿಯ ಸಂಸದ ಸ್ಟೀವ್ ಸ್ಕಲೀಸ್ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.ಸಂಸದರ ನಡುವಣ ವಾರ್ಷಿಕ ಬೇಸ್ಬಾಲ್ ಪಂದ್ಯಕ್ಕಾಗಿ ಅಭ್ಯಾಸ ನಡೆಸುತ್ತಿದ್ದ ವೇಳೆ ಗುಂಡಿನ ದಾಳಿ ನಡೆದಿದೆ.ಈ ಬಗ್ಗೆ ರಿಪಬ್ಲಿಕನ್ ಪಕ್ಷದ ಮತ್ತೊಬ್ಬ ಸಂಸದ ಮೊ ಬ್ರೂಕ್ಸ್ ಅವರು ಸಿಎನ್ಎನ್ ಸುದ್ದಿವಾಹಿನಿಗೆ ಮಾಹಿತಿ ನೀಡಿದ್ದು, ಕನಿಷ್ಠ ಇಬ್ಬರು ಅಧಿಕಾರಿಗಳು ಮತ್ತು ಸಂಸತ್ನ ಒಬ್ಬ ಸಿಬ್ಬಂದಿ ಗಾಯಗೊಂಡಿರುವುದಾಗಿ ತಿಳಿಸಿದ್ದಾರೆ. ದಾಳಿಕೋರ ಮಧ್ಯವಯಸ್ಸಿನ ಬಿಳಿಯ ವ್ಯಕ್ತಿ ಎಂದು ಅವರು ತಿಳಿಸಿದ್ದಾರೆ.ಈ ಮಧ್ಯೆ, ವರ್ಜಿನಿಯಾ ಪೊಲೀಸರು ದಾಳಿಕೋರನನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಶ್ರೀಲಂಕಾ ವಿರುದ್ಧ ಭಾರತ ತಂಡ ಸೋತಿದ್ದರೂ ಬ್ಯಾಟಿಂಗ್ ನಲ್ಲಿ ಪರಾಕ್ರಮ ಮೆರೆದ ಶಿಖರ್ ಧವನ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
The ICC Champions Trophy with Sri Lanka in to bat, India lost Shikhar Dhawan world record for topping prowess.
ಶ್ರೀನಗರ ಬಂದ್ ಗೆ ಹುರಿಯತ್ ನಾಯಕರು ಕರೆ ನೀಡಿರುವ ಹಿನ್ನೆಲೆಯಲ್ಲಿ 7 ಪ್ರದೇಶಗಳಲ್ಲಿ ನಿರ್ಬಂಧ ಹೇರಲು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಶುಕ್ರವಾರ ನಿರ್ಧಾರ...
The J&K government has on Today decided to impose restrictions in seven areas of Srinagar following a shutdown call by Hurriyat leaders.
ಕ್ಯಾಲಿಫೋರ್ನಿಯಾದಲ್ಲಿ ಭಾರತೀಯನ ಮೇಲೆ ಗುಂಡಿನ ದಾಳಿ; ವರದಿ ಕೇಳಿದ ಸುಷ್ಮಾ ಸ್ವರಾಜ್
ನವದೆಹಲಿ: ಕಳೆದ ಜೂನ್ 4ರಂದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭಾರತೀಯನ ಮೇಲೆ ನಡೆದಿದ್ದ ಗುಂಡಿನ ದಾಳಿ ಪ್ರಕರಣ ಸಂಬಂಧ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರಾಯಭಾರ ಕಚೇರಿಯಿಂದ ಮಾಹಿತಿ ಕೇಳಿದ್ದಾರೆ.ಸುಷ್ಮಾ ಮಾಡಿರುವ ಟ್ವೀಟ್ ಅನ್ವಯ ದಾಳಿಗೊಳಗಾದ 26 ವರ್ಷದ ಮುಬೀನ್ ಅಹ್ಮದ್ ತೆಲಂಗಾಣ ಮೂಲದವನಾಗಿದ್ದು, ಕ್ಯಾಲಿಫೋರ್ನಿಯಾದ ಗ್ಯಾಸ್ ಸ್ಟೇಷನ್ ನಲ್ಲಿ ಕೆಲಸ ಮಾಡುತ್ತಿದ್ದ. ಜೂನ್ 4 ರಾತ್ರಿ ಆತನ ಮೇಲೆ ದಾಳಿ ಮಾಡಿದ್ದ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದರು. ಪ್ರಸ್ತುತ ಆತನನ್ನು ಈಡನ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ನಾವೂ ಕೂಡ ತನಿಖೆಯ ವರದಿಯನ್ನು ಪರಿಶೀಲಿಸುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.ಮುಬೀನ್ ಅವರ ಸಂಬದಿಯೊಬ್ಬರು ಹೇಳಿಕೆ ನೀಡಿದ್ದು, ಕೆಲಸ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ಮುಬೀನ್ ನ ಮೇಲೆ ಕೆಲ ಕಪ್ಪು ವರ್ಣೀಯ ಯುವಕರ ತಂಡ ದಾಳಿ ಮಾಡಿದೆ. ಈ ವೇಳೆ ಆತನಿಂದ ಹಣ ಕಿತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.2015ರ ಫೆಬ್ರವರಿಯಲ್ಲಿ ಎಂಜಿನಿಯರಿಂಗ್ ಸ್ನಾತಕೋತ್ತರ ಪದವಿ ಪಡೆಯಲು ಮುಬೀನ್ ಅಹ್ಮದ್ ಕ್ಯಾಲಿಫೋರ್ನಿಯಾಕ್ಕೆ ತೆರಳಿದ್ದರು. ಇದಕ್ಕೂ ಮೊದಲು ರಾಯಲ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಇಂಜಿನಿಯರಿಂಗ್ ವಿಭಾಗದಲ್ಲಿ ಬಿಟೆಕ್ ಮಾಡಿದ್ದ ಮುಬೀನ್ ಅಹ್ಮದ್ ಅಲ್ಲಿನ ಸ್ಥಳೀಯ ಡಿಪಾರ್ಟ್ ಮೆಂಟಲ್ ಸ್ಟೋರ್ ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ನೌಗಾಮ್ ಎನ್'ಕೌಂಟರ್: ಉಗ್ರರು ಬಳಸಿದ್ದ ಶಸ್ತ್ರಾಸ್ತ್ರಗಳು, ಔಷಧಿಗಳ ಮೇಲೆ ಪಾಕ್ ಗುರುತು ಪತ್ತೆ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ನೌಗಾಮ್ ಬಳಿ ಭಾರತೀಯ ಸೇನೆ ಎನ್ ಕೌಂಟರ್ ನಡೆಸಿದ ಬಳಿಕ ವಶಕ್ಕೆ ಪಡೆದುಕೊಳ್ಳಲಾದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಔಷಧಿಗಳ ಮೇಲೆ ಪಾಕಿಸ್ತಾನದ ಗುರುತುಗಳಿರುವುದು ಪತ್ತೆಯಾಗಿದೆ ಎಂದು ಶುಕ್ರವಾರ ತಿಳಿದುಬಂದಿದೆ. ನಿನ್ನೆಯಷ್ಟೇ ಜಮ್ಮು ಮತ್ತು ಕಾಶ್ಮೀರದಲ್ಲಿ ವಿವಿಧೆಡೆ ಸೇನಾ ಪಡೆ ಕಾರ್ಯಾಚರಣೆ ನಡೆಸಿತ್ತು. ಉರಿ ಸೆಕ್ಟರ್ ಬಳಿಯಿರುವ ಗಡಿ ನಿಯಂತ್ರಣ ರೇಳೆ ಬಳಿ ಎನ್ ಕೌಂಟರ್ ನಡೆಸಿ 5-6 ಉಗ್ರರನ್ನು ಹತ್ಯೆ ಮಾಡಿತ್ತು. ಕುಪ್ವಾರ ಜಿಲ್ಲೆಯ ನೌಗಾಮ್ ಗಡಿ ನಿಯಂತ್ರಣ ರೇಖೆ ಬಳಿ ಗಡಿ ನುಸುಳಲು ಯತ್ನ ನಡೆಸುತ್ತಿದ್ದ ಮೂವರು ಉಗ್ರರನ್ನು ಸೇನೆ ಹತ್ಯೆ ಮಾಡಿತ್ತು. ಈ ವೇಳೆ ನಡೆದ ಗುಂಡಿನ ಚಕಮಕಿ ವೇಳೆ ಓರ್ವ ಯೋಧ ಹುತಾತ್ಮನಾಗಿ, ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಉಗ್ರರನ್ನು ಹತ್ಯೆ ಮಾಡಿದ ಬಳಿಕ ಸ್ಥಳದಲ್ಲಿ ಕಾರ್ಯಾಚರಣೆಯನ್ನು ಮತ್ತೆ ಮುಂದುವರೆಸಿದ್ದ ಸೇನಾ ಪಡೆ ಉಗ್ರರು ಬಳಸಿದ್ದ ಔಷಧಿಗಳು, ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿತ್ತು. ಉಗ್ರರು ಬಳಸಿದ್ದ ವಸ್ತುಗಳ ಮೇಲೆ ಪಾಕಿಸ್ತಾನ ರಾಷ್ಟ್ರದ ಗುರುತುಗಳಿರುವುದು ಪತ್ತೆಯಾಗಿದ್ದು, ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆಂದು ತಿಳಿದುಬಂದಿದೆ.
ಶ್ರೀನಗರ ಬಂದ್'ಗೆ ಹುರಿಯತ್ ನಾಯಕರ ಕರೆ: 7 ಪ್ರದೇಶಗಳಲ್ಲಿ ನಿರ್ಬಂಧ ಜಾರಿ
ಶ್ರೀನಗರ: ಶ್ರೀನಗರ ಬಂದ್ ಗೆ ಹುರಿಯತ್ ನಾಯಕರು ಕರೆ ನೀಡಿರುವ ಹಿನ್ನೆಲೆಯಲ್ಲಿ 7 ಪ್ರದೇಶಗಳಲ್ಲಿ ನಿರ್ಬಂಧ ಹೇರಲು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಶುಕ್ರವಾರ ನಿರ್ಧಾರ ಕೈಗೊಂಡಿದೆ. ಈ ಕುರಿತಂತೆ ಶ್ರೀನಗರ ಉಪ ಆಯುಕ್ತರು ಪ್ರತಿಕ್ರಿಯೆ ನೀಡಿದ್ದು, ಶುಕ್ರವಾರ ಹಿನ್ನಲೆಯಲ್ಲಿ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತಿದ್ದು, ಶ್ರೀನಗರ ಬಂದ್ ಗೆ ಪ್ರತ್ಯೇಕತಾವಾದಿಗಳು ಕರೆ ನೀಡಿದ್ದಾರೆ. ಹೀಗಾಗಿ ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆವಹಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕನ್ಯಾರ್, ಮಹರಾಜ್ ಗುಂಡ್, ಸಫಾ ಕಡಲ್, ರೈನ್ವಾರಿ, ಕ್ರಾಲ್ ಖುದ್, ನೌಹಟ್ಟಾ ಮೈಸುಮಾ ಪ್ರದೇಶಗಳಲ್ಲಿ ನಿರ್ಬಂಧ ಜಾರಿಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಶೋಪಿಯಾನ್ ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಯುವಕನೊಬ್ಬ ಸಾವನ್ನಪ್ಪಿದ್ದ. ಯುವಕನ ಸಾವಿನ ಹಿಂದೆ ಸರ್ಕಾರದ ಕೈವಾಡವಿದೆ ಎಂದು ಹೇಳಿರುವ ಪ್ರತ್ಯೇಕತಾವಾದಿಗಳು ಕಾಶ್ಮೀರದಲ್ಲಿ ಇಂದು ಶಾಂತಿಯುತ ಪ್ರತಿಭಟನೆ ನಡೆಸಲು ಕರೆ ನೀಡಿದ್ದಾರೆ. ಅಲ್ಲದೆ, ಮೃತಪಟ್ಟ ಯುವಕನ ಮನೆಗೆ ಕಾಲ್ನಡಿಗೆ ಮೂಲಕ ಭೇಟಿ ನೀಡಲು ನಿರ್ಧರಿಸಿದ್ದಾರೆ. ಇದಲ್ಲದೆ, ಎರಡು ಪ್ರತ್ಯೇಕ ಹುರಿಯತ್ ಕಾನ್ಫರೆನ್ಸ್ ಗಳು ಭಾರತೀಯ ವಿದ್ಯುನ್ಮಾನ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದು, ಭಾರತೀಯ ಮಾಧ್ಯಮಗಳು ಕಾಶ್ಮೀರಿಗರ ವಿರುದ್ಧ ಪೂರ್ವಾಗ್ರಹ ಪೀಡಿತ ಹಾಗೂ ಪಕ್ಷಪಾತ ಸುದ್ದಿಗಳನ್ನು ನೀಡುತ್ತಿವೆ ಎಂದು ಆರೋಪಿಸಿವೆ.
2014ರ ಚುನಾವಣೆಯಲ್ಲಿ ಭರ್ಜರಿ ಗೆಲವು ಸಾಧಿಸುತ್ತೇವೆಂದು ಮೋದಿ ಕೂಡ ಊಹಿಸಿರಲಿಲ್ಲ: ರಾಜನಾಥ ಸಿಂಗ್
ಮುಂಬೈ: 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲವು ಸಾಧಿಸುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಕೂಡ ಊಹಿಸಿರಲಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಗುರುವಾರ ಹೇಳಿದ್ದಾರೆ. ಕೇಂದ್ರದ ಎನ್ ಡಿಎ ಸರ್ಕಾರ ಮೂರು ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ತಮ್ಮ ಕಚೇರಿಯಲ್ಲಿ ಮಾತನಾಡಿರುವ ಅವರು, ಅಂದು ನಾನು ಪಕ್ಷದ ಅಧ್ಯಕ್ಷನಾಗಿದ್ದೆತ. ನರೇಂದ್ರ ಮೋದಿಯವರು ಪ್ರಚಾರದ ಮುಖ್ಯಸ್ಥರಾಗಿದ್ದರು. ಪ್ರಚಾರದ ವೇಳೆ ಜನರ ಪ್ರತಿಕ್ರಿಯೆ ಹಾಗೂ ಅಭಿಪ್ರಾಯಗಳ ಬಗ್ಗೆ ನಾವು ಚರ್ಚೆ ನಡೆಸುತ್ತಿದ್ದೆವು. ಬಿಜೆಪಿ ಸರಿಯಾದ ನಡೆಯಲ್ಲಿ ನಡೆಯುತ್ತಿದ್ದು ನ್ಯಾಯಯುತವಾಗಿ ಸ್ಪರ್ಧಿಸಿ, ಇತರೆ ಪಕ್ಷಗಳ ಸಹಾಯದೊಂದಿಗೆ ಅಧಿಕಾರಕ್ಕೆ ಬರುತ್ತದೆ ಎಂದು ನಾವು ಊಹಿಸಿದ್ದೆವು. ಪ್ರಚಾರ ಅಂತಿಮ ಘಟ್ಟ ತಲುಪುತ್ತಿದ್ದಂತೆಯೇ ಚುನಾವಣೆ ಬಗ್ಗೆ ಮೋದಿಯವರ ಅಂದಾಜು ಏನಿರಬಹುದು ಎಂದು ಕೇಳಿದ್ದೆ, ಈ ವೇಳೆ ಅವರು ಏನನ್ನೂ ಹೇಳಲು ಸಾಧ್ಯವಿಲ್ಲ ಎಂದಿದ್ದರು. ಇದು ಅಂದಿನ ನಮ್ಮ ಆಲೋಚನೆಗಳಾಗಿತ್ತು. ನಮ್ಮ ಹಿರಿಯರ ಶ್ರಮ ಎಂದಿಗೂ ವಿಫಲವಾಗಲ್ಲ. ಒಂದಲ್ಲ ಒಂದು ದಿನ ಬಿಜೆಪಿ ವಿಶ್ವದಲ್ಲಿ ಅತ್ಯಂತ ದೊಡ್ಡ ಪಕ್ಷವಾಗಲಿದೆ ಎಂದು ನಾವು ನಂಬಿದ್ದೆವು. ಇದೀಗ ಬಿಜೆಪಿಯಲ್ಲಿ 11 ಕೋಟಿ ಸದಸ್ಯರಿದ್ದಾರೆ. ಕಾಂಗ್ರೆಸ್ ಪಕ್ಷ ಮಾತ್ರ ಸರ್ಕಾರ ನಡೆಸಲು ಸಾಧ್ಯ ಎಂಬ ತಿಳುವಳಿಕೆಯನ್ನು ಜನರು ಸುಳ್ಳಾಗಿಸಿದ್ದಾರೆಂದು ತಿಳಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಮುಕ್ತಾಯಕ್ಕೂ ಮುನ್ನವೇ ಟೀಂ ಇಂಡಿಯಾಗೆ ಹೊಸ ಕೋಚ್?
ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಟೀಂ ಇಂಡಿಯಾಗೆ ನೂತನ ಕೋಚ್ ಆಯ್ಕೆಯಾಗುವ ಸಾಧ್ಯತೆಗಳು ಇವೆ. ಟೀಂ ಇಂಡಿಯಾ ಕೋಚ್ ಹುದ್ದೆಗೆ ಪ್ರಸಕ್ತ ಕೋಚ್ ಅನಿಲ್ ಕುಂಬ್ಳೆ ಅವರು ಅರ್ಜಿ ಸಲ್ಲಿಸಿದ್ದು ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅನಿಲ್ ಕುಂಬ್ಳೆ ಅವರು ಮತ್ತೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ. ಅವರನ್ನು ನೇರವಾಗಿ ಸಂದರ್ಶನ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಮುಕ್ತಾಯದೊಂದಿಗೆ ಅನಿಲ್ ಕುಂಬ್ಳೆ ಅವರ ಕೋಚ್ ಗುತ್ತಿಗೆ ಮುಕ್ತಾಯಗೊಳ್ಳಲಿದ್ದು ಈ ಹಿನ್ನೆಲೆಯಲ್ಲಿ ಬಿಸಿಸಿಐ ಸಹ ಅರ್ಜಿಗಳನ್ನು ಆಹ್ವಾನಿಸಿದೆ. ಇನ್ನು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಟಾಮ್ ಮೂಡಿ, ರಿಚರ್ಡ್ ಪೇಬಸ್, ಲಾಲ್ ಚಂದ್ ರಾಜಪೂತ್ ಮತ್ತು ದೊಡ್ಡ ಗಣೇಶ್ ಅವರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಕೋಚ್ ಹುದ್ದೆಗೆ ಅರ್ಜಿ ಸಲ್ಲಿರುವವರನ್ನು ಕ್ರಿಕೆಟ್ ಸಲಹಾ ಸಮಿತಿ ಸದಸ್ಯರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಅವರು ಸಂದರ್ಶನ ನಡೆಸಲಿದ್ದಾರೆ.
ಶೊಯೆಬ್ ಅಖ್ತರ್ ನಾನು ಎದುರಿಸಿದ ಕಠಿಣ ಬೌಲರ್: ಎಂಎಸ್ ಧೋನಿ
ಲಂಡನ್: ಪಾಕಿಸ್ತಾನದ ಮಾಜಿ ವೇಗಿ ಶೊಯೆಬ್ ಅಖ್ತರ್ ವೃತ್ತಿ ಜೀವನದಲ್ಲೇ ನಾನು ಕಂಡ ಅತ್ಯಂತ ಕಠಿಣ ಬೌಲರ್ ಎಂದು ಟೀಂ ಇಂಡಿಯಾ ಆಟಗಾರ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.ಸೋಮವಾರ ನಡೆದ ವಿರಾಟ್ ಕೊಹ್ಲಿ ಫೌಂಡೇಷನ್ ಸಂಸ್ಥೆಯ ಔತಣಕೂಟದಲ್ಲಿ ಮಾತನಾಡಿದ ಎಂಎಸ್ ಧೋನಿ ತಮ್ಮ 13 ವರ್ಷದ ವೃತ್ತಿ ಜೀವನದಲ್ಲಿ ತಾವು ಕಂಡ ಅತ್ಯಂತ ಕಠಿಣ ಬೌಲರ್ ಗಳಲ್ಲಿ ಪಾಕಿಸ್ತಾನದ ಮಾಜಿ ವೇಗಿ ಶೊಯೆಬ್ ಅಖ್ತರ್ ಗೆ ಮೊದಲ ಸ್ಥಾನ ನೀಡುವುದಾಗಿ ಹೇಳಿದ್ದಾರೆ."ನಾನು ವಿಶ್ವದ ಅನೇಕ ಬೌಲರ್ ಗಳನ್ನು ಎದುರಿಸಿದ್ದೇನೆ. ಪ್ರತಿಯೊಬ್ಬ ವೇಗಿಗಳೂ ಒಬ್ಬರಿಗಿಂತ ಒಬ್ಬರು ಭಿನ್ನರು. ಅವರನ್ನು ಎದುರಿಸಲು ನನ್ನದೇ ಆದ ತಂತ್ರವಿದೆ. ಆದರೂ ವೇಗದ ಬೌಲರ್ ಗಳನ್ನು ಎದುರಿಸುವುದು ಅತ್ಯಂತ ಕಠಿಣ. ಇದಾಗ್ಯೂ ಒಬ್ಬರನ್ನು ಆಯ್ಕೆ ಮಾಡಿ ಎಂದರೆ ನನ್ನ ಆಯ್ಕೆ ಖಂಡಿತಾ ಅಖ್ತರ್. ಅವರು ಅತ್ಯಂತ ವೇಗವಾಗಿ ದಾಳಿ ಮಾಡುತ್ತಿದ್ದರು. ಯಾರ್ಕರ್, ಬೌನ್ಸರ್ ಗಳನ್ನು ಎಸೆಯುತ್ತಿದ್ದರು. ಅವರ ವೇಗದ ದಾಳಿಗೆ ಉತ್ತರಿಸುವುದು ಸುಲಭದ ಕೆಲಸವಾಗಿರಲಿಲ್ಲ" ಎಂದು ಧೋನಿ ಹೇಳಿದ್ದಾರೆ
ಮೊದಲ ಬಾರಿಗೆ 'ಗೋಲ್ಡನ್ ಡಕ್' ಆದ ಎಬಿಡಿ ವಿಲಿಯರ್ಸ್
ಲಂಡನ್: ದಕ್ಷಿಣ ಆಫ್ರಿಕಾದ ನಾಯಕ ಎಬಿಡಿ ವಿಲಿಯರ್ಸ್ ತಮ್ಮ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಇದೇ ಮೊದಲ ಬಾರಿಗೆ ಏಕದಿನ ಪಂದ್ಯವೊಂದರಲ್ಲಿ ಗೋಲ್ಡನ್ ಡಕ್ ಆಗಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಎಬಿಡಿ ವಿಲಿಯರ್ಸ್ ಮೊದಲ ಎಸೆತದಲ್ಲಿ ಔಟ್ ಆಗುವ ಮೂಲಕ ಗೋಲ್ಡನ್ ಡಕ್ ಆಗಿದ್ದಾರೆ. ಪಾಕಿಸ್ತಾನ ಸ್ಪಿನ್ ಬೌಲರ್ ಇಮದ್ ವಸೀಂ ಎಸೆತದಲ್ಲಿ ಮೊಹಮ್ಮದ್ ಹಫೀಜ್ ಗೆ ಕ್ಯಾಚ್ ನೀಡಿ ಔಟಾದರು. ಎಬಿಡಿ ವಿಲಿಯರ್ಸ್ 216 ಏಕದಿನ ಪಂದ್ಯಗಳನ್ನು ಆಡಿದ್ದು 9175 ರನ್ ಸಿಡಿಸಿದ್ದಾರೆ. ಶೇಕಡ 54.60 ಬ್ಯಾಟಿಂಗ್ ಸರಾಸರಿ ಹೊಂದಿರುವ ಅವರು ಇಲ್ಲಿಯವರೆಗೂ ಗೋಲ್ಡನ್ ಡಕ್ ಆಗಿರಲಿಲ್ಲ ಎಂಬುದು ವಿಶೇಷವಾಗಿತ್ತು.
ಡಕ್ವರ್ಥ್ ನಿಯಮದಡಿ ಆಫ್ರಿಕಾ ವಿರುದ್ಧ ಗೆದ್ದ ಪಾಕ್
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದು ಡಕ್ವರ್ಥ್ ಲೂಯಿಸ್ ನಿಯಮದಡಿ ಪಾಕಿಸ್ತಾನ 19 ರನ್ ಗಳ ಜಯ ಸಾಧಿಸಿದೆ. ಬರ್ಮಿಂಗ್ ಹ್ಯಾಮ್ ನ ಎಡ್ಜ್ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 219 ರನ್ ಮಾತ್ರ ಗಳಿಸಿತು. ಆಫ್ರಿಕಾ ನೀಡಿದ ಸಾಧಾರಣ ಮೊತ್ತ ಬೆನ್ನಟ್ಟಿದ ಪಾಕಿಸ್ತಾನ 27 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿತ್ತು. ಈ ವೇಳೆ ಮಳೆ ಬಂದಿದ್ದರಿಂದ ಪಂದ್ಯ ರದ್ದು ಮಾಡಲಾಯಿತು. ನಂತರ ಡಕ್ವರ್ಥ್ ಲೂಯಿಸ್ ನಿಯಮದಡಿ ಪಾಕಿಸ್ತಾನಕ್ಕೆ 27 ಓವರ್ ನಲ್ಲಿ 101 ರನ್ ಟಾರ್ಗೆಟ್ ನೀಡಲಾಯಿತು. ಮಳೆಗೂ ಮುನ್ನ ಪಾಕಿಸ್ತಾನ 119 ರನ್ ಗಳಿಸಿದ್ದರಿಂದ 19 ರನ್ ಮುನ್ನಡೆ ಪಡೆದಿತ್ತು. ನಂತರ ಪಾಕಿಸ್ತಾನ 19 ರನ್ ಜಯ ಎಂದು ಐಸಿಸಿ ಘೋಷಿಸಿತು. ದಕ್ಷಿಣ ಆಫ್ರಿಕಾ ಪರ ಡಿ ಕಾಕ್ 33, ಹಾಸೀಂ ಆಮ್ಲಾ 16, ಡುಪ್ಲೇಸಿಸ್ 26, ಮಿಲ್ಲರ್ ಅಜೇಯ 75 ರನ್ ಗಳಿಸಿದ್ದಾರೆ. ಪಾಕಿಸ್ತಾನ ಪರ ಹಸನ್ ಅಲಿ 3, ಜುನೈದ್ ಖಾನ್, ಇಮಾದ್ ವಾಸೀಂ ತಲಾ 2 ವಿಕೆಟ್ ಪಡೆದಿದ್ದಾರೆ.